BR Mahesh ma LLB

BR Mahesh ma LLB ಸತ್ಯ ಮೇವ ಜಯತೇ

ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅತ್ಯಂತ ಮುಖ್ಯ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯ ತಿಥಿಯಂದು ಆ ಮ...
30/01/2022

ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅತ್ಯಂತ ಮುಖ್ಯ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯ ತಿಥಿಯಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು.🙏🙏

ಬಾಪೂಜಿ ಅವರ ಶ್ರಮ ಜೀವನ, ಗ್ರಾಮ ಸ್ವರಾಜ್ಯ, ಸ್ವಚ್ಛತೆ, ರಾಮ ರಾಜ್ಯದ ಪರಿಕಲ್ಪನೆಗಳು ಸಾರ್ವಕಾಲಿಕ ತತ್ವಾದರ್ಶಗಳಾಗಿದ್ದು ಅವರ ಹಾದಿಯಲ್ಲಿ ಮುನ್ನಡೆಯೋಣ.MaheshMahi

ಇಂದು *ಪಂಜಾಬ ಕೇಸರಿ* ಎಂದೇ ಹೆಸರು ವಾಸಿಯಾಗಿರುವ *ಲಾಲಾ ಲಜಪತ ರಾಯ್* ರವರ ಜನ್ಮದಿನ, ಈ *ಮಹಾನ್ ಚೇತನಕ್ಕೆ ಅನಂತ ಕೋಟಿ ನಮನ...*🙏ದೇಶದ ಪ್ರಖ್ಯಾ...
28/01/2022

ಇಂದು *ಪಂಜಾಬ ಕೇಸರಿ*
ಎಂದೇ ಹೆಸರು ವಾಸಿಯಾಗಿರುವ *ಲಾಲಾ ಲಜಪತ ರಾಯ್* ರವರ ಜನ್ಮದಿನ, ಈ *ಮಹಾನ್ ಚೇತನಕ್ಕೆ ಅನಂತ ಕೋಟಿ ನಮನ...*🙏

ದೇಶದ ಪ್ರಖ್ಯಾತ ತ್ರಿಮೂರ್ತಿಗಳಾದ *ಲಾಲ್ ಬಾಲ್ ಪಾಲ್* ಎಂದೇ ಪ್ರಸಿದ್ದರಾದವರಲ್ಲಿ ಒಬ್ಬರು. ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ತಾಯಿ ಭಾರತಿಗೆ ಅರ್ಪಿಸಿದ ಮಹಾನ್ ಚೇತನ .
ಪಂಜಾಬ್ ಮೋಗಾ ಜಿಲ್ಲೆಯ ಧುಡಿಕೆ ಎಂಬಲ್ಲಿ ಜನವರಿ 28 ರಂದು ಜನಿಸಿದ ಲಾಲಾಗೆ ದೇಶಭಕ್ತಿ ರಕ್ತದಲ್ಲಿಯೆ ಬಂದಿತ್ತು.
1928 ರಲ್ಲಿ ಸೈಮನ್ ಭಾರತಕ್ಕೆ ಆಗಮಿಸುವ ವಿಚಾರವನ್ನು ತಿಳಿದು, ಅನೇಕ ಕ್ರಾಂತಿಕಾರಿ ಯುವಕರನ್ನು ಒಟ್ಟುಗೂಡಿಸಿ ಆತನನ್ನು ಭಾರತದ ನೆಲಕ್ಕೆ ಕಾಲಿಡದಂತೆ ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಂಡರು. ಬ್ರಿಟೀಷರು ಈ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮಾಡಿದಾಗ ಲಾಲಾಗೆ ಏಟು ಬಿತ್ತು.
ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನವೆಂಬರ್ 17, 1928 ರಂದು ಅವರು ಕೊನೆಯುಸಿರೆಳೆದರು.
ಇದೇ ಸಂದರ್ಭದಲ್ಲಿ ಲಾಲಾ ಲಜಪತ್ ರಾಯ್ ಅವರು, *ಇಂದು ನನಗೆ ಬಿದ್ದ ಏಟುಗಳು ಭಾರತದಲ್ಲಿ* *ಬ್ರಿಟೀಷರ ಆಡಳಿತದ‌ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಗಳು'* ಎಂದಿದ್ದರು.
ಅಲ್ಲಿಂದ ಮೊದಲುಗೊಂಡು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಹೊಸ ಶಕೆ ಆರಂಭವಾಯಿತು.

27/01/2022

ಚಿಕ್ಕಬಳ್ಳಾಪುರ ವಕೀಲರ ಸಂಘ(ರಿ)

26/05/2021

Real hero

19/04/2021

🌷ಪಾನಿಪುರಿ ಚಾಟ್ಸ್ ತಿನ್ನದೆ ಇದ್ದರೆ ಪ್ರಪಂಚ ಏನು ಮುಳುಗಿಹೋಗಲ್ಲ ಬೇಕಿದ್ದರೆ ಮನೆಯಲ್ಲೇ ಮಾಡಿ ತಿನ್ನೋಣ.🌷 ಮತ್ತೆ ಕಷಾಯ ನಾರು-ಬೇರು ಗಿಡಮೂಲಿಕೆ ಶುರು ಮಾಡೋಣ ಕ್ಲಬ್ಬು- ಪಬ್ಬು ಮುಂತಾದ ಕಾರುಬಾರು ಗಳಿಂದ ಕೆಲವು ತಿಂಗಳು ದೂರವಿರೋಣ🌷 ಆದಷ್ಟು ಗುಂಪು ಕೊಡುವುದನ್ನು ಕಡಿಮೆ ಮಾಡೋಣ ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕವಾಗಿ,ದುಗುಡ ಆತಂಕದಿಂದ ದೂರವಿರೋಣ🌷 ಅದಕ್ಕಿಂತ ಮುಖ್ಯವಾಗಿ ಉದ್ವೇಗ ಖಿನ್ನತೆ ಗೆ ದೂಡುವ ಟಿವಿ ಪ್ರಸಾರ ಮಾಧ್ಯಮಗಳಿಂದ ದೂರ ಇರೋಣ. 🌷 ಒಂದೆರಡು ತಿಂಗಳ ಸಂಪಾದನೆ ಕಡಿಮೆಯಾದರೂ ಮುಂದೆ ಸಂಪಾದನೆ ಮಾಡಬಹುದು.... ಹೆಚ್ಚು ಕಡಿಮೆಯಾಗಿ ಆಸ್ಪತ್ರೆ ಸೇರಿದರೆ ನರಕದರ್ಶನ ತಪ್ಪದು. 🌷 ಒಂದಷ್ಟು ದಿನ ಸರ್ವಜನಿಕವಾಗಿ ಹೆಚ್ಚು ಜನಸಂದಣಿ ಜಾಗದಲ್ಲಿ ಓಡಾಡುವುದನ್ನು ಬಿಡೋಣ.🌷 ಮನರಂಜನಾ ಸ್ಥಳಗಳಿಂದ ದೂರವಿದ್ದು ಅದನ್ನು ಮನೆಯಲ್ಲೇ ಅನುಭವಿಸೋಣ.🌷 ಹಬ್ಬ-ಹರಿದಿನ ಕ್ಕೆ ನಾವು ಯಾರನ್ನು ಕರೆಯುವುದು ಬೇಡ ನಾವು ಯಾರ ಮನೆಗೆ ಹೋಗುವುದು ಬೇಡ ತಿಂಗಳಿಗಾಗುವಷ್ಟು ದಿನಸಿ ಒಂದೇ ಬಾರಿ ತರುವುದರಿಂದ ಪದೇಪದೇ ಅಂಗಡಿಗೆ ಹೋಗುವುದನ್ನು ತಪ್ಪಿಸೋಣ. 🌷ಅದಕ್ಕಾಗಿ ಸರಕಾರ... ಸಮಾಜ... ವ್ಯವಸ್ಥೆ... ಇವುಗಳನ್ನು ಟೀಕಿಸುವುದು ಬಿಟ್ಟು ನಮ್ಮನ್ನು ನಾವೇ ನಿರ್ಮಿಸಿಕೊಳ್ಳುವುದು ಸರಿಯಾದ ಮಾರ್ಗ.ಇವೆಲ್ಲಾ ಸರಿಯಾದರೆ ಇದನ್ನು ಬೇರೆಯವರಿಗೆ ತಲುಪಿಸಿ.... ಇಲ್ಲದಿದ್ದರೆ * #ಈಸಲತಪ್ ನಮ್ದೇ #* ಇಂತಿ ನಿಮ್ಮವ ಮಹೇಶ್. ಬಿ.ಆರ್. ವಕೀಲರು ಮತ್ತು ಉಪಾಧ್ಯಕ್ಷರು ಮೈತ್ರಿ ಫೌಂಡೇಶನ್ ಟ್ರಸ್ಟ್ ( ರಿ).

Address

Chik Ballapur
562101

Website

Alerts

Be the first to know and let us send you an email when BR Mahesh ma LLB posts news and promotions. Your email address will not be used for any other purpose, and you can unsubscribe at any time.

Share

Category