Harish Gowda Hmt

Harish Gowda Hmt A prominent advocate who has practiced under the able guidance of a legal luminary and renowned Senior Advocates.

Working as a lawyer involves the practical application of abstract legal theories and knowledge to solve specific individualized problems, or to advance the interests of those who retain (i.e., hire) lawyers to perform legal services. Excellent lawyer in the field of almost all types of Criminal trial cases.

ನಾಳಿನ ಸುಂದರ ದಿನಗಳಿಗಾಗಿ ನಮ್ಮ ಈ ಪುಣ್ಯ ಭೂಮಿಯನ್ನು ಉಳಿಸಿ. ಪ್ರಕೃತಿ ಉಳಿದರೆ ನಾವು ಉಳಿದಂತೆ.  ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್...
05/06/2026

ನಾಳಿನ ಸುಂದರ ದಿನಗಳಿಗಾಗಿ ನಮ್ಮ ಈ ಪುಣ್ಯ ಭೂಮಿಯನ್ನು ಉಳಿಸಿ. ಪ್ರಕೃತಿ ಉಳಿದರೆ ನಾವು ಉಳಿದಂತೆ.
ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಜವಾಬ್ದಾರಿ ಕೂಡಾ ಹೌದು. ಪರಿಸರ ಉಳಿಸೋಣ, ಹಸಿರನ್ನು ಬೆಳೆಸೋಣ.
#ಎಲ್ಲರಿಗೂ_ವಿಶ್ವ_ಪರಿಸರ_ದಿನದ_ಶುಭಾಶಯಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

* ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ.  #...
27/05/2026

* ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ.
#ಬಕ್ರೀದ್_ಹಬ್ಬದ_ಶುಭಾಶಯಗಳು.

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

🇮🇳 Fundamental Rights – The Soul of the Indian Constitution 🇮🇳The Fundamental Rights enshrined in Part III (Articles 12–...
15/05/2026

🇮🇳 Fundamental Rights – The Soul of the Indian Constitution 🇮🇳
The Fundamental Rights enshrined in Part III (Articles 12–35) of the Constitution of India are the foundation of democracy, equality, freedom, and justice. These rights protect every citizen and ensure dignity and liberty for all.
✨ The Six Fundamental Rights:
⚖️ Right to Equality (Articles 14–18)
Ensures equality before law and abolishes discrimination, untouchability, and unfair titles.
🕊️ Right to Freedom (Articles 19–22)
Guarantees freedom of speech, expression, movement, profession, and protection of life and personal liberty.
🚫 Right against Exploitation (Articles 23–24)
Prohibits human trafficking, forced labor, and child labor in hazardous industries.
🛕 Right to Freedom of Religion (Articles 25–28)
Provides freedom to practice, profess, and propagate any religion.
📚 Cultural & Educational Rights (Articles 29–30)
Protects the language, culture, and educational rights of minorities.
🏛️ Right to Constitutional Remedies (Article 32)
Empowers citizens to approach courts for the protection and enforcement of their rights.
💡 Fundamental Rights are not just legal provisions — they are the pillars that uphold justice, liberty, equality, and fraternity in our nation.

Harisha MT
Advocate
Bengaluru Advocate Association

 #ಭಾರತೀಯ_ಸಂವಿಧಾನದ_ಮೂಲಭೂತ_ಹಕ್ಕುಗಳುಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ ನಡೆಸಲು ಕೆಲವು ಪ್ರಮುಖ ಹಕ್ಕುಗಳನ್ನು ನೀಡ...
15/05/2026

#ಭಾರತೀಯ_ಸಂವಿಧಾನದ_ಮೂಲಭೂತ_ಹಕ್ಕುಗಳು

ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ ನಡೆಸಲು ಕೆಲವು ಪ್ರಮುಖ ಹಕ್ಕುಗಳನ್ನು ನೀಡಿದೆ. ಇವುಗಳನ್ನು “ಮೂಲಭೂತ ಹಕ್ಕುಗಳು” ಎಂದು ಕರೆಯಲಾಗುತ್ತದೆ. ಭಾರತದ ಸಂವಿಧಾನದ ಭಾಗ–3ರಲ್ಲಿ, ಕಲಂ 12 ರಿಂದ 35ರವರೆಗೆ ಈ ಹಕ್ಕುಗಳನ್ನು ವಿವರಿಸಲಾಗಿದೆ. ಮೂಲಭೂತ ಹಕ್ಕುಗಳು ಪ್ರಜಾಪ್ರಭುತ್ವದ ಹೃದಯವಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ರಕ್ಷಿಸುತ್ತವೆ.
ಮೊದಲನೆಯದಾಗಿ ಸಮಾನತೆಯ ಹಕ್ಕು (Right to Equality) ಎಲ್ಲ ನಾಗರಿಕರೂ ಕಾನೂನಿನ ಮುಂದೆ ಸಮಾನರು ಎಂದು ಹೇಳುತ್ತದೆ. ಜಾತಿ, ಧರ್ಮ, ಲಿಂಗ, ಭಾಷೆ ಅಥವಾ ಜನ್ಮಸ್ಥಳದ ಆಧಾರದ ಮೇಲೆ ಯಾರ ಮೇಲೂ ಭೇದಭಾವ ಮಾಡಬಾರದು. ಇದು ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುತ್ತದೆ.
ಎರಡನೆಯದಾಗಿ ಸ್ವಾತಂತ್ರ್ಯದ ಹಕ್ಕು (Right to Freedom) ನಾಗರಿಕರಿಗೆ ಮಾತಿನ ಸ್ವಾತಂತ್ರ್ಯ, ಅಭಿವ್ಯಕ್ತಿಯ ಸ್ವಾತಂತ್ರ್ಯ, ಸಂಘಟನೆ ಮಾಡುವ ಹಕ್ಕು, ದೇಶದ ಎಲ್ಲೆಡೆ ಸಂಚರಿಸುವ ಹಕ್ಕು ಹಾಗೂ ಯಾವುದೇ ಉದ್ಯೋಗ ಅಥವಾ ವ್ಯವಹಾರ ಮಾಡುವ ಹಕ್ಕುಗಳನ್ನು ನೀಡುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವ ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ.
ಮೂರನೆಯದಾಗಿ ಶೋಷಣೆಯ ವಿರುದ್ಧದ ಹಕ್ಕು (Right Against Exploitation) ಮಕ್ಕಳ ಕಾರ್ಮಿಕತೆ, ಬಲವಂತದ ಕೆಲಸ ಮತ್ತು ಮಾನವ ಶೋಷಣೆಯನ್ನು ತಡೆಯುತ್ತದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ಕೆಲಸಕ್ಕೆ ಹಾಕುವುದು ಕಾನೂನುಬಾಹಿರವಾಗಿದೆ.
ನಾಲ್ಕನೆಯದಾಗಿ ಧರ್ಮದ ಸ್ವಾತಂತ್ರ್ಯದ ಹಕ್ಕು (Right to Freedom of Religion) ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಚ್ಛೆಯ ಧರ್ಮವನ್ನು ಅನುಸರಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಅವಕಾಶ ನೀಡುತ್ತದೆ. ಭಾರತವು ಧರ್ಮನಿರಪೇಕ್ಷ ರಾಷ್ಟ್ರವಾಗಿರುವುದರಿಂದ ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡುತ್ತದೆ.
ಐದನೆಯದಾಗಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು (Cultural and Educational Rights) ಅಲ್ಪಸಂಖ್ಯಾತ ಸಮುದಾಯಗಳ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣವನ್ನು ರಕ್ಷಿಸುತ್ತವೆ. ತಮ್ಮದೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನೂ ನೀಡುತ್ತವೆ.
ಕೊನೆಯದಾಗಿ ಸಾಂವಿಧಾನಿಕ ಪರಿಹಾರದ ಹಕ್ಕು (Right to Constitutional Remedies) ಮೂಲಭೂತ ಹಕ್ಕುಗಳು ಉಲ್ಲಂಘನೆಯಾದರೆ ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ನೀಡುತ್ತದೆ. ಇದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ “ಹೃದಯ ಮತ್ತು ಆತ್ಮ” ಎಂದು ಕರೆದಿದ್ದಾರೆ.
ಭಾರತೀಯ ಮೂಲಭೂತ ಹಕ್ಕುಗಳು ಪ್ರತಿಯೊಬ್ಬ ನಾಗರಿಕನ ಗೌರವ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಕಾಪಾಡುವ ಶಕ್ತಿಶಾಲಿ ಅಸ್ತ್ರಗಳಾಗಿವೆ. ಇವು ದೇಶದ ಏಕತೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ.

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ


ನಿಸ್ವಾರ್ಥ ಪ್ರೀತಿ, ನಿರ್ಮಲ ಮನಸ್ಸಿನ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಜಗತ್ತಿನ ಎಲ್ಲಾ ಅಮ್ಮಂದಿರಿಗೂ  #ತಾಯಂದಿರ_ದಿನದ_ಶುಭ...
10/05/2026

ನಿಸ್ವಾರ್ಥ ಪ್ರೀತಿ, ನಿರ್ಮಲ ಮನಸ್ಸಿನ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಜಗತ್ತಿನ ಎಲ್ಲಾ ಅಮ್ಮಂದಿರಿಗೂ #ತಾಯಂದಿರ_ದಿನದ_ಶುಭಾಶಯಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

's_day

* ಒಬ್ಬ ಕಾರ್ಮಿಕ ಅದ್ಭುತಗಳ ನಿರ್ಮಾತೃ ಮತ್ತು ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ. ನುರಿತ,ಶಿಸ್ತುಬದ್ಧ ಮತ್ತು ಸಮಯಪ್ರಜ್ಞೆಯ ಕೆಲಸಗಾರರು ನಮ್ಮೆ...
01/05/2026

* ಒಬ್ಬ ಕಾರ್ಮಿಕ ಅದ್ಭುತಗಳ ನಿರ್ಮಾತೃ ಮತ್ತು ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ.

ನುರಿತ,ಶಿಸ್ತುಬದ್ಧ ಮತ್ತು ಸಮಯಪ್ರಜ್ಞೆಯ ಕೆಲಸಗಾರರು ನಮ್ಮೆಲ್ಲರ ಪಾಲಿಗೆ ದೊಡ್ಡ ನಿಧಿ ಇದ್ದಂತೆ. ಹೀಗಾಗಿ ಈ ದಿನ ಕಾರ್ಮಿಕರ ಎಲ್ಲಾ ಕೊಡುಗೆಗಳನ್ನು ನಾವು ಸ್ಮರಿಸೋಣ.

"ಕಷ್ಟಪಟ್ಟು ದುಡಿಯಲು ಎಂದಿಗೂ ಹಿಂಜರಿಯಬೇಡಿ.ಯಾಕಂದರೆ,ಕಷ್ಟಪಟ್ಟು ದುಡಿಯುವುದೇ ಯಶಸ್ಸಿನ ಕೀಲಿ ಕೈಯಾಗಿದೆ"

ಕಠಿಣ ಪರಿಶ್ರಮವು ನಿಮ್ಮನ್ನು ಎಂದಿಗೂ ವಿಫಲಗೊಳಿಸುವುದಿಲ್ಲ.

#ಕಾರ್ಮಿಕರ_ದಿನಾಚರಣೆಯ_ಶುಭಾಶಯಗಳು.

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

*ಸಮಾನತೆಯ ತತ್ವ ಸಾರಿದ ಭಕ್ತಿಭಂಡಾರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಅಂಧ ಶ್ರದ್ಧೆಗಳ ವಿರುದ್ಧ ಧ್ವನಿ ಎತ್ತಿದ ಮಾರ್ಗದರ್ಶಕ. ವಚನಗಳ ಮೂಲಕ ಜೀವನ...
20/04/2026

*ಸಮಾನತೆಯ ತತ್ವ ಸಾರಿದ ಭಕ್ತಿಭಂಡಾರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಅಂಧ ಶ್ರದ್ಧೆಗಳ ವಿರುದ್ಧ ಧ್ವನಿ ಎತ್ತಿದ ಮಾರ್ಗದರ್ಶಕ. ವಚನಗಳ ಮೂಲಕ ಜೀವನಾದರ್ಶಗಳನ್ನು ಬೋಧಿಸಿದ ಮಹಾನ್ ಚಿಂತಕ ಬಸವಣ್ಣನವರು*

ಬಸವಣ್ಣನವರು ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅರಿವಿನ ಕಿರಣ ಬೀರಿದವರು. ವಿಶ್ವಗುರುವಿನ ಒಂದೊಂದು ವಚನವೂ ಎಲ್ಲರ ಬದುಕಿಗೂ ಆದರ್ಶ, ಸ್ಫೂರ್ತಿ.

ಸಮಾನತೆಯ ಹರಿಕಾರ,ಸುಂದರ ಸಮಾಜದ ಕನಸುಕಾರ,ಕರುನಾಡು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ತತ್ವ,ಆದರ್ಶ, ಸಂದೇಶಗಳು ಇಂದಿಗೂ ಪ್ರಸ್ತುತ. ಇವರ ಒಂದೊಂದು ವಚನಗಳೂ ನಮಗೆ ದಾರಿದೀಪ. ಸರ್ವರಿಗೂ ಂತಿಯ_ಹಾರ್ದಿಕ_ಶುಭಾಶಯಗಳು



ಹರೀಶ ಎಮ್ ಟಿ (ಹೆಚ್ ಎಮ್ ಟಿ )
ವಕೀಲರು
ಬೆಂಗಳೂರು ವಕೀಲರ ಸಂಘ

"ಸಂವಿಧಾನ ಶಿಲ್ಪಿ, ಜ್ಞಾನದ ಸಂಕೇತ, ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು".ಪ್ರಜಾಪ್ರಭುತ್ವ ಎಂದರೆ ಕೇವಲ ಆ...
14/04/2026

"ಸಂವಿಧಾನ ಶಿಲ್ಪಿ, ಜ್ಞಾನದ ಸಂಕೇತ, ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು".

ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಜೊತೆಯಾಗಿ ಬಾಳುವ ವಿಧಾನ, ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮವಾಗಿದೆ.
ಡಾ. ಬಿ. ಆರ್. ಅಂಬೇಡ್ಕರ್
ನಮಗೆ ಸಮಾನತೆಯ ಹಾದಿಯನ್ನು ತೋರಿಸಿದ ಮತ್ತು ಸಹೋದರತ್ವದ ಗುರಿಯತ್ತ ನಮ್ಮನ್ನು ಮುನ್ನಡೆಸಿದ ಮಹಾನ್ ಶಕ್ತಿಯನ್ನು ನಾವು ಸ್ಮರಿಸೋಣ.

ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಡಾ. ಬಿ. ಆರ್‌ ಅಂಬೇಡ್ಕರ್ ರವರ ಸಾಧನೆ ಹಾಗೂ ದೇಶ ನಿರ್ಮಾಣದಲ್ಲಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ.

ದೇಶಕ್ಕೆ ಸದೃಢ ಸಂವಿಧಾನ ನೀಡಿದ, ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ #ಭಾರತ_ರತ್ನ_ಡಾ_ಬಿ_ಆರ್_ಅಂಬೇಡ್ಕರ್ ರವರ #135ನೇ_ಜನ್ಮಜಯಂತಿಯಂದು ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.


ಹರೀಶ ಎಮ್ ಟಿ ( ಹೆಚ್ ಎಮ್ ಟಿ )
ವಕೀಲರು
ಬೆಂಗಳೂರು ವಕೀಲರ ಸಂಘ

* ಮನುಕುಲದ ಒಳಿತಿಗಾಗಿ ಏಸುಕ್ರಿಸ್ತರು ತಮ್ಮನ್ನು ತಾವು ಸಮರ್ಪಿಸಿಕೊಂಡು ಜಗತ್ತಿಗೆ ಮಾನವೀಯತೆ, ದಯಾಗುಣವನ್ನು ಸಾರಿದ ದಿನವಿಂದು. ದೇವರು ನಮ್ಮ ಮ...
03/04/2026

* ಮನುಕುಲದ ಒಳಿತಿಗಾಗಿ ಏಸುಕ್ರಿಸ್ತರು ತಮ್ಮನ್ನು ತಾವು ಸಮರ್ಪಿಸಿಕೊಂಡು ಜಗತ್ತಿಗೆ ಮಾನವೀಯತೆ, ದಯಾಗುಣವನ್ನು ಸಾರಿದ ದಿನವಿಂದು. ದೇವರು ನಮ್ಮ ಮೇಲೆ ಸದಾ ದಯಪಾಲಿಸುವ ಎಲ್ಲಾ ಪ್ರೀತಿಗಾಗಿ ಧನ್ಯವಾದ ಹೇಳೋಣ *

#ಗುಡ್‌_ಫ್ರೈಡೇಯ_ಶುಭಾಶಯಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ಕಾಯಕವೇ ಕೈಲಾಸ:- "ನೀವು ಸೇವಿಸುವ ಅನ್ನ, ಬೇಯಿಸುವ ನೀರು ನಿಮ್ಮ ದುಡಿಮೆಯ ಬೆವರಾಗಿರಬೇಕೇ ಹೊರತು, ಬೇರೆಯವರ ಕಣ್ಣೀರಾಗಿರಬಾರದು."ಯಾರೂ ಸೋಮಾರಿಗಳ...
01/04/2026

ಕಾಯಕವೇ ಕೈಲಾಸ:- "ನೀವು ಸೇವಿಸುವ ಅನ್ನ, ಬೇಯಿಸುವ ನೀರು ನಿಮ್ಮ ದುಡಿಮೆಯ ಬೆವರಾಗಿರಬೇಕೇ ಹೊರತು, ಬೇರೆಯವರ ಕಣ್ಣೀರಾಗಿರಬಾರದು."

ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ, ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.

ಮಾತು ಮಿತವಾಗಿರಬೇಕು,ಹಿತವಾಗಿರಬೇಕು, ಪ್ರೀತಿಯಿಂದಿರಬೇಕು,ಸರಳವಾಗಿರಬೇಕು, ಮಧುರವಾಗಿರಬೇಕು,ಮೃದುವಾಗಿರಬೇಕು,ಮಾತು ತಪಸ್ಸು ಎನ್ನುವಂತಿರಬೇಕು.
ಡಾ." ಶ್ರಿ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿರವರು"


ಶತಮಾನದ ಮಾಹಾನ್ ಸಂತ...
ತ್ರಿವಿಧ ದಾಸೋಹಿ,ನಡೆದಾಡುವ ದೇವರು,
ಸಿದ್ದಗಂಗಾ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ
119 ನೇ ಜಯಂತಿಯ ಶುಭ ನಮನಗಳು...

#2026

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

Address

HMT Law Associate Hanamanth Nagar Bangalore
Bangalore
560019

Website

Alerts

Be the first to know and let us send you an email when Harish Gowda Hmt posts news and promotions. Your email address will not be used for any other purpose, and you can unsubscribe at any time.

Share