13/10/2026
ಶುಭ ರಾತ್ರಿ ಬಂದುಗಳೆ...
ಕಪ್ಪು ಕೋಟಿನ ಗಾಂಭೀರ್ಯದಲಿ, ಬಿಳಿ ಪಟ್ಟಿಯ ಪಾವಿತ್ರ್ಯದಲಿ, ಸತ್ಯದ ಹುಡುಕಾಟದ ಹಾದಿಯಲಿ ಹೊರಟಿರುವೆವು ನಾವು. ಕಣ್ಣಲಿ ಜ್ಞಾನದ ಜ್ಯೋತಿ, ಮನದಲಿ ನ್ಯಾಯದ ದೀಪ್ತಿ, ಕಡತದ ಪುಟಗಳ ತಿರುಗಿಸಿ, ಸತ್ಯದ ಬೆನ್ನತ್ತಿರುವೆವು ನಾವು.
ನೊಂದವರ ಧ್ವನಿಯಾಗಲು, ಅನ್ಯಾಯದ ಗೋಡೆಯ ಒಡೆಯಲು, ಒಂದಾಗಿ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವೆವು ನಾವು. ಬಲಹೀನರ ಕೈಹಿಡಿದು, ಕಾನೂನಿನ ಬೆಳಕನ್ನು ಮೂಡಿಸಲು, ಯಾರಿಗೂ ಹೆದರದೆ ಧೀರತೆಯಿಂದ ಮುನ್ನುಗ್ಗುತಿರುವೆವು ನಾವು.
ಕೇವಲ ಕಾಗದದ ತುಣುಕಲ್ಲ ನಮ್ಮ ಕೈಲಿರುವ ಆ ದಾಖಲೆ, ಅದು ಅದೆಷ್ಟೋ ಜೀವಗಳ ಭರವಸೆಯ ಮಹಾ ಸಂಕೇತ. ನ್ಯಾಯದ ತಕ್ಕಡಿ ಸದಾ ಸಮನಾಗಿ ತೂಗಲಿ ಎಂದು, ಶ್ರಮಿಸುತಿಹ ನಮ್ಮ ಈ ಒಗ್ಗಟ್ಟಿನ ವೃತ್ತಿಗೆ ನಮ್ಮದೇ ಹೆಮ್ಮೆಯ ನಮನ.