APCR Karnataka

Call Directions Contact the business

APCR Karnataka APCR is Educating & informing public about their civil rights.

Association for Protection of Civil Rights (APCR): Educating Civil Rights, Legal Defence to the Victim of Injustice, Research & Documentation, Training/Workshop

05/10/2026

🚨 Voter Alert: Has your name been wrongfully deleted or objected to in the Voter List using Form 7?

Misuse of Form 7 to target genuine voters is a serious concern. To protect your democratic right, APCR Karnataka has launched the Form-7 Objection Complaints Generator.

🔹 Generate a formal complaint in seconds

🔹 Ready-to-download format for ERO / AERO

🔹 Free, fast, and easy to use

🔗 Generate your complaint here: https://apcrdigital-hub.github.io/ceo-petition-kar/

🔹Download, sign, attach supporting documents and submit the complaint with ERO

🔹Never forget to take a receiving/ acknowledgement when submitting the complaint from the authorities

Spread the word to protect every vote!

An initiative by APCR Karnataka

Subject: Complaint seeking urgent intervention and legal action against false Form-7 application filed to illegally delete my name from the Electoral Roll

ಎಪಿಸಿಆರ್ (APCR) ಕರ್ನಾಟಕದ ವತಿಯಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ: ಫಾರ್ಮ್ 7ರ ದುರ್ಬಳಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳ...
01/10/2026

ಎಪಿಸಿಆರ್ (APCR) ಕರ್ನಾಟಕದ ವತಿಯಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ: ಫಾರ್ಮ್ 7ರ ದುರ್ಬಳಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ.

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ (SIR) ಪ್ರಕ್ರಿಯೆಯ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ವ್ಯಕ್ತಿ/ಪಕ್ಷದ ಏಜೆಂಟರು ಫಾರ್ಮ್ -7ರ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿ, ನಿರ್ದಿಷ್ಟವಾಗಿ ಒಂದು ಸಮುದಾಯದ ಅರ್ಹ ಮತದಾರರನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಾಮೂಹಿಕ ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣವು ಹಲವು ಪತ್ರಿಕೆ/ಮಾಧ್ಯಮಗಳ ವರದಿಯಿಂದ ಬಹಿರಂಗವಾಗಿದೆ.

ಫಾರ್ಮ್ -7 ಅನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ವಿರೋಧಿಗಳನ್ನು ಪ್ರಜಾಪ್ರಭುತ್ವದ ಮತದಾನದ ಹಕ್ಕಿನಿಂದ ವಂಚಿತಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೃತ್ಯವನ್ನು ಮಾಡಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮತ್ತು ಫಾರ್ಮ್ 7 ರಲ್ಲಿ ಆಕ್ಷೇಪಣೆಗೆ ಒಳಗಾಗಿರುವ ಮತದಾರರಿಗೆ ಫಾರ್ಮ್ 14ರ ಕಡ್ಡಾಯ ನಿಯಮ ಪಾಲನೆ ಹಾಗೂ ಕ್ಷೇತ್ರ ಪರಿಶೀಲನೆ ನಡೆಸುವ ಮೂಲಕ ಚುನಾವಣಾ ಆಯೋಗವು ಯಾವುದೇ ಅರ್ಹ ಮತದಾರನು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಲು ಎಪಿಸಿಆರ್ ಕರ್ನಾಟಕದ ರಾಜ್ಯ ಸಂಯೋಜಕ ಮೊಹಮ್ಮದ್ ಪೀರ್ ಲಟಗೇರಿ ಹಾಗೂ ಸಹಾಯಕ ಸಂಯೋಜಕರಾದ ಅಯಾನ್ ರವರು ಬೆಂಗಳೂರಿನ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರವನ್ನು ಸಲ್ಲಿಸಿದರು.






ಎಪಿಸಿಆರ್ (APCR) ಶಿವಮೊಗ್ಗ ಜಿಲ್ಲೆಯ ವತಿಯಿಂದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ರವರ ಏಕಪಕ್ಷೀಯ ನಿರ್ಧಾರ, ಮತದಾರರ ಪಟ್ಟಿಯ ಪರಿ...
28/09/2026

ಎಪಿಸಿಆರ್ (APCR) ಶಿವಮೊಗ್ಗ ಜಿಲ್ಲೆಯ ವತಿಯಿಂದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ರವರ ಏಕಪಕ್ಷೀಯ ನಿರ್ಧಾರ, ಮತದಾರರ ಪಟ್ಟಿಯ ಪರಿಷ್ಕರಣೆಯ ಲೋಪದೋಷಗಳು ಹಾಗೂ ನಾಗರಿಕರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉಲ್ಲಂಘಿಸುವ ಕ್ರಮಗಳ ವಿರುದ್ಧ ತನಿಖೆ ನಡೆಸಿ, ತಕ್ಷಣವೇ ಹುದ್ದೆಯಿಂದ ವಜಾಗೊಳಿಸಲು ಇತರ ಜನಪರ ಸಂಘಟನೆಗಳ ಜೊತೆಗೂಡಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹ ಪತ್ರವನ್ನು ಸಲ್ಲಿಸಲಾಯಿತು.

APCR Shivamogga

ಎಪಿಸಿಆರ್ (APCR) ಕರ್ನಾಟಕದ ವತಿಯಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್(SIR) ನ ಎರಡನೇ ಅವಧಿಯ ಹಕ್ಕು ಮತ್ತು ಆಕ್ಷೇಪಣೆಯ ಸಂದರ್ಭದಲ್ಲಿ ...
22/09/2026

ಎಪಿಸಿಆರ್ (APCR) ಕರ್ನಾಟಕದ ವತಿಯಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್(SIR) ನ ಎರಡನೇ ಅವಧಿಯ ಹಕ್ಕು ಮತ್ತು ಆಕ್ಷೇಪಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23ರ ಕೊನೆಯ ದಿನಾಂಕವಾಗಿದ್ದು, ಈಗಾಗಲೇ ಎಎಸ್ಡಿಡಿಒ(ASDDO) ಪಟ್ಟಿಯಲ್ಲಿ ಹೆಸರು ಇದ್ದುದ್ದರಿಂದ ಡಿಲಿಟ್ ಆದ ಅರ್ಹ ಮತದಾರರು ಮತ್ತು ಹೊಸ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ಎರಡು ತಿಂಗಳ ವರೆಗೆ ನವೆಂಬರ್ ತಿಂಗಳ ತನಕ ವಿಸ್ತರಿಸಲು ರಾಜ್ಯ ಚುನಾವಣಾಧಿಕಾರಿಗಳಿಗೆ ಎಪಿಸಿಆರ್ ಮನವಿ ಪತ್ರ ಸಲ್ಲಿಸಿದೆ.

ರಾಜ್ಯ ಸಹಾಯಕ ಸಂಯೋಜಕರಾದ ಅಯಾನ್ ರವರು ಬೆಂಗಳೂರಿನ ರಾಜ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ವಲಸೆ ಕಾರ್ಮಿಕರು, ಬಡವರು, ಅಲೆಮಾರಿಗಳು ಹಾಗೂ ಅಗತ್ಯ ದಾಖಲೆ ಹೊಂದಿಸಿಕೊಳ್ಳಲು ಅಲೆದಾಡುತ್ತಿರುವ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಗತ್ಯ ಸಮಯಾವಕಾಶ ನೀಡುವಂತೆ ಅಧಿಕಾರಿಗಳಿಗೆ ಪತ್ರದ ಮುಖೇನ ನೀಡಿ, ಆಗ್ರಹಿಸಲಾಯಿತು.








APCR Karnataka

ಎಪಿಸಿಆರ್ (APCR) ಹಾಸನ ಜಿಲ್ಲೆಯ ವತಿಯಿಂದ ಸೆಪ್ಟೆಂಬರ್ 19ರ ಶನಿವಾರದಂದು ಹಾಸನ ನಗರದಲ್ಲಿ ವಲಯ ಮಟ್ಟದ ಆ್ಯಕ್ಟಿವಿಸ್ಟ್ ಕಾರ್ಯಾಗಾರ ಮತ್ತು ಕಾನ...
22/09/2026

ಎಪಿಸಿಆರ್ (APCR) ಹಾಸನ ಜಿಲ್ಲೆಯ ವತಿಯಿಂದ ಸೆಪ್ಟೆಂಬರ್ 19ರ ಶನಿವಾರದಂದು ಹಾಸನ ನಗರದಲ್ಲಿ ವಲಯ ಮಟ್ಟದ ಆ್ಯಕ್ಟಿವಿಸ್ಟ್ ಕಾರ್ಯಾಗಾರ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿಗಳಿಗಾಗಿ ಅರಿವು-ನೆರವು ಕಾರ್ಯಾಗಾರ ನಡೆಯಿತು.

ವಿವಿಧ ಜಿಲ್ಲೆಗಳ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಗೆ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುವ ಕುರಿತು ಚರ್ಚೆ, ಸಂವಾದ ಮತ್ತು ಉಪನ್ಯಾಸ ನಡೆಸಲಾಯಿತು.

ಕಾರ್ಯಾಗಾರವನ್ನು ಜಿಲ್ಲೆ ಕಾನೂನು ಸೇವಾ ಪ್ರಾಧಿಕಾರ ಸದಸ್ಯರಾದ ದ್ರಾಕ್ಷಾಯಿಣಿ ರವರು ಉದ್ಘಾಟಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಎಂ. ಇರ್ಷಾದ್ ರವರು ವಿಶ್ವ ಶಾಂತಿ ದಿನದ ಕುರಿತು ಮಾತನಾಡಿದರು ಮತ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲರಾದ ಅಕ್ಮಲ್ ರಜ್ವಿ ರವರು ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಗೆ ನಾಗರಿಕ ಹಕ್ಕುಗಳ ರಕ್ಷಣೆಯ ಬಗ್ಗೆ ಅರಿವು ಮತ್ತು ವಕಾಲತ್ತು ನಡೆಸುವ ಕುರಿತು ಉಪನ್ಯಾಸ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಸಂಯೋಜಕ ಮಹಮ್ಮದ್ ಪೀರ್, ಮಾಹಿತಿ/ತಂತ್ರಜ್ಞಾನದ ವಿಶ್ಲೇಷಕ ಶಾಝಿನ್ ಸಿದ್ದೀಕಿ ಹಾಗೂ ಮೊಹಮ್ಮದ್ ರಫಿ ರವರು ಸಮಾಜದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಮತ್ತು ನಾಗರಿಕ ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ಲೇಷಣಾತ್ಮಕ ಮಾಹಿತಿಯ ಬಗ್ಗೆ ವಿವರಿಸಿದರು.






18/09/2026

ಎಪಿಸಿಆರ್(APCR) ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 19ರ ಶನಿವಾರದಂದು ಹಾಸನ ನಗರದಲ್ಲಿ ನಡೆಯುವ ವಲಯ ಮಟ್ಟದ ಆ್ಯಕ್ಟಿವಿಸ್ಟ್ ಮತ್ತು ಕಾನೂನು ಅರಿವು-ನೆರವು ಕಾರ್ಯಾಗಾರದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಯೋಜಕ ಮಹಮ್ಮದ್ ಪೀರ್ ರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಎಪಿಸಿಆರ್(APCR) ಹಾಸನದ ವತಿಯಿಂದ ನಿನ್ನೆ ಗುರುವಾರ ಸೆಪ್ಟೆಂಬರ್ 17ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್, ಜಿಲ್ಲಾ ಕಾರ್ಯದರ್ಶಿ ಬುಡೇನ್ ಶರೀಫ್, ಅಹಮ್ಮದ್ ಜಾನ್, ಆಲೂರು ಬಾಬು ಹಾಗೂ ಮಹಮ್ಮದ್ ರಿಯಾಜ್ ಉಪಸ್ಥಿತರಿದ್ದರು.







APCR Karnataka

📢 Regional Level Activists Workshop | APCR Karnataka ChapterJoin us for an insightful session with esteemed resource per...
18/09/2026

📢 Regional Level Activists Workshop | APCR Karnataka Chapter

Join us for an insightful session with esteemed resource persons discussing civil rights and community advocacy.

📅 Saturday, 19th September 2026
🕥 10:30 AM Onwards
📍 Islamic Centre, Hassan

For queries: 74834 04587
Follow


ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರವರ ದ್ವೇಷ ಭಾಷಣ ವಿರುದ್ಧ ಸುಮೋಟೋ ಕೇಸ್ ದಾಖಲಿಸಲು ಬಾಗಲಕೋಟೆ ಎಸ್.ಪಿ(SP) ಗೆ ಎಪಿಸಿಆರ್(APCR) ದೂರು.ವಿಜಯಪು...
15/09/2026

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರವರ ದ್ವೇಷ ಭಾಷಣ ವಿರುದ್ಧ ಸುಮೋಟೋ ಕೇಸ್ ದಾಖಲಿಸಲು ಬಾಗಲಕೋಟೆ ಎಸ್.ಪಿ(SP) ಗೆ ಎಪಿಸಿಆರ್(APCR) ದೂರು.

ವಿಜಯಪುರ ನಗರದ ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಬಾಗಲಕೋಟೆಯ ಬಸವೇಶ್ವರ ಸರ್ಕಲ್‌ನಲ್ಲಿ ಬಾಗಲಕೋಟೆ ಸಾಮೂಹಿಕ ಗಣೇಶೋತ್ಸವದ ಅನಾವರಣ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಧರ್ಮ ಹಾಗೂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದರ ಜೊತೆಗೆ ಬಾಗಲಕೋಟೆಯ ಮಸೀದಿಗಳನ್ನು ಉಲ್ಲೇಖಿಸಿ “ಪಂಕಾ ಮಸೀದಿ ಆಗಿರಲಿ, ಲಂಕಾ ಮಸೀದಿ ಆಗಿರಲಿ” ಎಂದು ಹೇಳಿರುವುದು ಹಾಗೂ ಕರ್ನಾಟಕ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಕುರಿತಂತೆ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಆದೇಶ/ನಿರ್ದೇಶನ ನೀಡುವ ಕುರಿತು ದೂರು ನೀಡಲಾಗಿದೆ.

ಈ ಕುರಿತು ನಿನ್ನೆ ಬಾಗಲಕೋಟೆ ಎಸ್.ಪಿ(SP) ಕಚೇರಿಯಲ್ಲಿ ದೂರು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎ.ಪಿ.ಸಿ.ಆರ್ ಬಾಗಲಕೋಟೆ ಜಿಲ್ಲಾಧ್ಯಕ್ಷ‌ರಾದ ನಬೀಸಾಬ್ ಟಂಕಸಾಲಿ, ಮುಸ್ಲಿಂ ಮುಖಂಡರ ಯುವಕರ ವೇದಿಕೆ ಅಧ್ಯಕ್ಷರಾದ ಅಯ್ಯೂಬಖಾನ ಬಾಗೇವಾಡಿ, ಮುಕ್ತಾರ್ ಮೋಮಿನ್, ಮೆಹಬೂಬ ಸವನೂರ ಹಾಗೂ ಕೆ.ಎಸ್. ಪಿಂಜಾರ್, ವಕೀಲರು ಉಪಸ್ಥಿತರಿದ್ದರು







APCR Bagalkot

13/09/2026

State Level Training Workshop For SIR Volunteers On "Claims and Objection/Notice Period"

🗓️ 5th September 2026

📍Auditorium Hall, Darussalam Building, Queen's Road, Bangalore

Organised By APCR Karnataka

Protecting Voters Right,
Strengthening Democracy







APCR Karnataka

ಎಸ್.ಐ.ಆರ್ (SIR) ನ ನೋಟಿಸ್ ವಿಚಾರಣೆಗೆ ಮತದಾರರಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡುವ ತೆಲಂಗಾಣ ಚುನಾವಣಾಧಿಕಾರಿಗಳ ಮಾದರಿಯನ್ನು ಅನುಸರಿಸಲು...
11/09/2026

ಎಸ್.ಐ.ಆರ್ (SIR) ನ ನೋಟಿಸ್ ವಿಚಾರಣೆಗೆ ಮತದಾರರಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡುವ ತೆಲಂಗಾಣ ಚುನಾವಣಾಧಿಕಾರಿಗಳ ಮಾದರಿಯನ್ನು ಅನುಸರಿಸಲು ರಾಜ್ಯ ಚುನಾವಣಾಧಿಕಾರಿಗಳಿಗೆ ಎಪಿಸಿಆರ್(APCR) ಸಲ್ಲಿಸಿದ್ದ ಮನವಿಗೆ ಹಾಗೂ ಇತರ ಜನಪರ ಸಂಘಟನೆಗಳ ಒತ್ತಾಯಕ್ಕೆ ಸ್ಪಂದಿಸಿ ಕುಟುಂಬದ ವಯಸ್ಕ ಸದಸ್ಯರು ವಿಚಾರಣೆ ಸೂಕ್ತ ದಾಖಲೆಯೊಂದಿಗೆ ಹಾಜರಾತಿಗೆ ಅವಕಾಶ ಕಲ್ಪಿಸಿ, ಆದೇಶ ಹೊರಡಿಸಿರುವ ಕರ್ನಾಟಕ ಚುನಾವಣಾಧಿಕಾರಿಗಳ ಕ್ರಮವನ್ನು ಸ್ವಾಗತಿಸುತ್ತೇವೆ.

ಇದರ ಪ್ರಯೋಜನವನ್ನು ವೃದ್ಧರು, ಅಗತ್ಯವುಳ್ಳವರು, ರೋಗಿಗಳು ಹಾಗೂ ಅನಿವಾಸಿ ಭಾರತೀಯರು(NRI) ಪಡೆಯಲು ಎಲ್ಲರೊಂದಿಗೂ ಮಾಹಿತಿಯನ್ನು ಹಂಚಿಕೊಳ್ಳಿ, ಅಂತಿಮ ಮತದಾರರ ಪಟ್ಟಿಯಿಂದ ಯಾವೊಬ್ಬ ಅರ್ಹ ಮತದಾರನು ಹೊರಗುಳಿದಂತೆ ನೋಡಿಕೊಳ್ಳೋಣ.







APCR Karnataka

Address

Bangalore
560032

Telephone

+917483404587

Website

Alerts

Be the first to know and let us send you an email when APCR Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to APCR Karnataka:

Shortcuts

Share

Category