21/05/2026
ಭಾರತಕ್ಕೆ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಕ್ರಾಂತಿಯನ್ನು ಪರಿಚಯಿಸಿದ ದೂರದೃಷ್ಟಿಯ ನಾಯಕ. ಯುವಜನತೆಗೆ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಯುವಶಕ್ತಿಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದವರು. ದೇಶದ ಏಕತೆ ಮತ್ತು ಅಖಂಡತೆಗಾಗಿ ಶ್ರಮಿಸುತ್ತಿದ್ದಾಗಲೇ ಭಯೋತ್ಪಾದನೆಗೆ ಬಲಿಯಾದ ಇವರ ತ್ಯಾಗ ಸ್ಮರಣೀಯ. ಶಾಂತಿ ಮತ್ತು ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಇವರು ಕಂಡ ಕನಸುಗಳು ಇಂದಿಗೂ ನಮಗೆ ದಾರಿದೀಪ.
ದೇಶಕ್ಕಾಗಿ ಪ್ರಾಣ ಅರ್ಪಿಸಿದ ಈ ಧೀಮಂತ ನಾಯಕನಿಗೆ ಗೌರವದ ಸಲಾಂ.
#ರಾಜೀವ್_ಗಾಂಧಿ #ಪುಣ್ಯತಿಥಿ #ಮಾಜಿಪ್ರಧಾನಿ #ಶ್ರೀತಾಯ್ನಾಡುರಾಘವೇಂದ್ರ #ಕನ್ನಡನಾಡಿನಹೆಮ್ಮೆ #ಭಾರತ